ಇನ್ಸ್ಟಾ ಗ್ರಾಮ್ ( instagram) ಅಕೌಂಟ್ ಹ್ಯಾಕ್ ಆಗಿದಿಯ ಅಥವಾ ಇಲ್ವಾ , ಅಂತ ಮತ್ತು ನಮಗೆ ಗೊತ್ತಿಲ್ಲದೆ ಯಾರಾದರೂ ನಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನ ಬಳಸುತ್ತಿದ್ದಾರ ಎಂದು ಚೆಕ್ ಮಾಡೋದೇಗೆ ಅಂತ ಮತ್ತು ಇನ್ಸ್ಟಾ ಗ್ರಾಮ್ ( instagram ) ಅಕೌಂಟ್ ಹ್ಯಾಕ್ ಆಗಿದ್ರೆ ಏನು ಮಾಡಬೇಕು ಅಂತ ಮಾಹಿತಿ ಇಲ್ಲಿದೆ ಸಂಪೂರ್ಣ ಓದಿ ತಿಳಿದುಕೊಳ್ಳಿ.
ಇನ್ಸ್ಟಾ ಗ್ರಾಮ್ ( instagram ) ಅಕೌಂಟ್ ಹ್ಯಾಕ್ ಆಗಿದಿಯ ಅಥವಾ ಇಲ್ವಾ ಅಂತ ಚೆಕ್ ಮಾಡುವ ಹಂತಗಳು
1. ಇನ್ಸ್ಟಾ ಗ್ರಾಮ್ ಆ್ಯಪ್ ನ ಓಪನ್ ಮಾಡಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ , ಮೇಲೆ ಬಲಗಡೆ ಸೈಡ್ ಮೂರ್ ಲೈನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ
2. ನಂತರ ಇಲ್ಲಿ ಅಕೌಂಟ್ ಸೆಂಟರ್ ( Account center ಮತ್ತು) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಕೆಳಗಿನ ಚಿತ್ರವನ್ನು ಗಮನಿಸಿ
3. ನಂತರ ಇಲ್ಲಿ ಪಾಸ್ವರ್ಡ್ ಅಂಡ್ ಪ್ರೈವಸಿ ( password and privacy ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ
4. ನಂತರ ಇಲ್ಲಿ ವೇರ್ ಇವರ್ ಲಾಗಡ್ ಇನ್ ( Where your logged in ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ
5. ನಂತರ ಎರಡು ಅಥವಾ ಮೂರು ಅಕೌಂಟ್ ಇದ್ರೆ ಯಾವ ಅಕೌಂಟ್ ಹ್ಯಾಕ್ ಆಗಿದಿ ಅಂತ ಚೆಕ್ ಮಾಡುವುದಕ್ಕೆ ಅ ಅಕೌಂಟ್ ನ ಸೆಲೆಕ್ಟ್ ಮಾಡಬೇಕು.
6. ನಂತರ ಇಲ್ಲಿ ನಿಮ್ಮ ಫೋನ್ ಹೆಸರನ್ನು ತೋರಿಸುತ್ತೆ . ನಿಮ್ಮ ಫೋನ್ ಹೆಸರು ಪಕ್ಕದಲ್ಲೇ ದೀಸ್ ಡಿವೈಸ್ ಅಂತ ತೋರಿಸುತ್ತೆ
ಅದು ನಿಮ್ಮ ಫೋನ್ ಆಗಿರುತ್ತೆ.
7. ನಂತರ ಕೆಳಗೆ ಲಾಗಿನ್ಸ್ ಆನ್ ಅದರ್ ಡಿವೈಸ್ ಅಂತ ( Loggins on other devices ) ಇರುತ್ತೆ ಇದರ ಕೆಳಗೆ
ಬೇರೆ ಫೋನ್ ಹೆಸರು ತೋರಿಸುತ್ತಿದ್ದರೆ ನಿಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನ ಬೇರೆಯವರು ಬಳಸುತ್ತಿದ್ದಾರೆ ಅಂತ. Loggins on other devices ಇರುತ್ತೆ ಇದರ ಕೆಳಗೆ
ಬೇರೆ ಫೋನ್ ಹೆಸರು ತೋರಿಸುತ್ತಿದ್ದರೆ ಅ ಹೆಸರು ಆಪ್ಷನ್ ಮೇಲೆ ಕ್ಲಿಕ್ ಮಾಡಿ logout ಅಂತ ಆಪ್ಷನ್ ಇರುತ್ತೆ logout ಆಪ್ಷನ್ ಮೇಲೆ ಕ್ಲಿಕ್ ಮಾಡಿ logout ಮಾಡಬೇಕು .
Logout ಮಾಡಿದ ಮೇಲೆ ಇನ್ಸ್ಟಾ ಗ್ರಾಮ್ ಪಾಸ್ವರ್ಡ್ ಚೇಂಜ್ ಮಾಡಿ. ಯಾಕಂದ್ರೆ ನಿಮ್ಮ ಪಾಸ್ವರ್ಡ್ ಬೇರೆಯವರಿಗೆ ಗೊತ್ತಿದ್ದರೆ ಅವರು ಮತ್ತೆ ನಿಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ಗೆ ಲಾಗಿನ್ ಆಗಿ ಬಳಸಬಹುದು.
ಇನ್ಸ್ಟಾ ಗ್ರಾಮ್ ಅಕೌಂಟ್ ಹ್ಯಾಕ್ ಆಗದೆ ಇರೋ ತರ ನೋಡಿಕೊಳ್ಳುವುದು ಹೇಗೆ
- ಇನ್ಸ್ಟಾ ಗ್ರಾಮ್ ಅಕೌಂಟ್ ಪಾಸ್ವರ್ಡ್ ಚೇಂಜ್ ಮಾಡಿ.
ಪಾಸ್ವರ್ಡ್ ಚೇಂಜ್ ಮಾಡೋದೇಗೆ ಅಂತ ವೀಡಿಯೋ ಮೂಲಕ ತಿಳಿದುಕೊಳ್ಳಬೇಕು ಅಂದರೆ ವೀಡಿಯೋ ಲಿಂಕ್ ಕೆಳಗೆ ಇದೆ. - ಇನ್ಸ್ಟಾ ಗ್ರಾಮ್ ಅಕೌಂಟ್ ಗೆ two step verification ಆನ್ ಮಾಡಬೇಕು. two step verification ಆನ್ ಮಾಡುದ್ರೆ ಇನ್ಸ್ಟಾ ಗ್ರಾಮ್ ಅಕೌಂಟ್ ಗೆ ಲಾಗಿನ್ ಆಗುವಾಗ user ID ಮತ್ತು password ಹಾಕಿದ ಮೇಲೆ ನಮ್ಮ ಫೋನ್ ನಂಬರ್ ಗೆ OTP ಬರುತ್ತೆ ಅ OTP ಎಂಟರ್ ಮಾಡುದ್ರೆ ಲಾಗಿನ್ ಆಗುತ್ತೆ. ಇದರಿಂದ ಬೇರೆಯವರು ನಿಮ್ಮ ಇನ್ಸ್ಟಾ ಗ್ರಾಮ್ ಗೆ ಲಾಗಿನ್ ಆಗುವಾಗ ನಿಮ್ಮ ಫೋನ್ ಗೆ OTP ಬರುತ್ತೆ, ಯಾರೋ ಲಾಗಿನ್ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತೆ.
ಇನ್ಸ್ಟಾ ಗ್ರಾಮ್ ಅಕೌಂಟ್ ಗೆ two step verification ಆನ್
ಮಾಡೋದೇಗೆ ಅಂತ ವೀಡಿಯೋ ಮೂಲಕ ತಿಳಿದುಕೊಳ್ಳುತ್ತಿವಿ ಅಂದರೆ ವೀಡಿಯೋ ಲಿಂಕ್ ಇಲ್ಲಿದೆ
ಇನ್ಸ್ಟಾ ಗ್ರಾಮ್ ಅಕೌಂಟ್ ಹ್ಯಾಕ್ ಆಗಿದಿಯ ಅಥವಾ ಇಲ್ವಾ ಚೆಕ್ ಮಾಡೋದೇಗೆ ಮತ್ತು two step verification ಆನ್ ಮಾಡುವ ವಿಡಿಯೋ ಲಿಂಕ್ 👇
ಇನ್ಸ್ಟಾ ಗ್ರಾಮ್ ಅಕೌಂಟ್ ಹ್ಯಾಕ್ ಆಗಿದಿಯ ಅಥವಾ ಇಲ್ವಾ ಚೆಕ್ ಮಾಡುವ ವೀಡಿಯೋ https://youtu.be/eiT9EZ6m3-Y?si=UWpIMnc_8aUjpq0K
Two step verification on ವೀಡಿಯೋ 👉 https://youtu.be/XEMjOC3obQ0?si=kxrdqA8SqYuTt6nP
ಇನ್ಸ್ಟಾ ಗ್ರಾಮ್ ಅಕೌಂಟ್ ಪಾಸ್ವರ್ಡ್ ಚೇಂಜ್ ಮಾಡುವ ವಿಡಿಯೋ ಲಿಂಕ್ 👉 https://youtu.be/pxSYo4bWCY8?si=zm_zOBDM7Pz3Ol9C
ಇದನ್ನು ಸಹ ಓದಿ deepawali / diwali: ದೀಪಾವಳಿ ( deepawali ) ಹಬ್ಬದ ಹಿಂದಿನ ಕಥೆ ಏನು? 14 ವರ್ಷ ವನವಾಸ ಮುಗಿಸಿ ಶ್ರೀ ರಾಮ ಅಯೋಧ್ಯೆ ಗೆ ಮರಳಿ ಬಂದ ದಿನ!