e aadhar download ಅಂದರೆ ಆಧಾರ್ ಕಾರ್ಡ್ ನ ಮೋಬೈಲ್ ನಲ್ಲಿ ಫ್ರೀಯಾಗಿ PDF ಫಾರ್ಮೇಟ್ ನಲ್ಲಿ ಐದು ಅಥವಾ ಹತ್ತು ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು. ಡೌನ್ಲೋಡ್ ಮಾಡೋದೇಗೆ ಅಂತ ಇಲ್ಲಿದೆ ಸಂಪೂರ್ಣ ಮಾಹಿತಿ. ಪೂರ್ತಿ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ. ಇದು ಒಂದು ರೀತಿಯಲ್ಲಿ e aadhar ಸಹಾ ಹೌದು.
ಆಧಾರ್ ಕಾರ್ಡ್ ನಲ್ಲಿ ಹೆಸರು, ಫೋನ್ ನಂಬರ್, ಡೇಟ್ ಆಫ್ ಬರ್ತ್ ಏನಾದರೂ ಚೇಂಜ್ ಮಾಡಿಸಿದರೆ ಅದು ಅಪ್ಡೇಟ್ ಆಗಿದಿಯ ಅಥವಾ ಇಲ್ವಾ ಅಂತ ಡೌನ್ಲೋಡ್ ಮಾಡಿ ಚೆಕ್ ಮಾಡಬಹುದು. ಮತ್ತು ನಾವು ಎಲ್ಲಾದರೂ ಹೊರಗಡೆ ಹೋಗಿದ್ದಾಗ ಕೆಲ ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ನ ಅವಶ್ಯಕತೆ ಇರುತ್ತದೆ ಅಂತಹ ಸಂದರ್ಭದಲ್ಲಿ ನಮ್ಮ ಹತ್ತಿರ ಆಧಾರ್ ಕಾರ್ಡ್ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ನ ಮೋಬೈಲ್ ನಲ್ಲಿ ಡೌನ್ಲೋಡ್ ಮಾಡಿ ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು.
ಮೋಬೈಲ್ ನಲ್ಲಿ ಆಧಾರ್ ಕಾರ್ಡ್ ಫೋಟೋ ಇದ್ದರೆ ಅದನ್ನು ಪ್ರಿಂಟ್ ಔಟ್ ತೆಗಿಸಿದರೆ ಅದು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ ಅದರ ಬದಲಾಗಿ ಮೋಬೈಲ್ ನಲ್ಲಿ ಆಧಾರ್ ಕಾರ್ಡ್ ನ ಡೌನ್ಲೋಡ್ (e aadhar download ) ಮಾಡಿಕೊಂಡಿದ್ದಾರೆ ನಮಗೆ ಬೇಕಾದ ಸಮಯದಲ್ಲಿ ಪ್ರಿಂಟ್ ಔಟ್ ತೆಗಿಸಿ ಬಳಸಬಹುದು.
Table of Contents
ಆಧಾರ್ ಕಾರ್ಡ್ ನ ಮೋಬೈಲ್ ನಲ್ಲಿ ಡೌನ್ಲೋಡ್ ಮಾಡೋದೇಗೆ ( e aadhar download ) ?
1) ಮೊದಲನೇ ಹಂತ
ಆಧಾರ್ ಕಾರ್ಡ್ ಡೌನ್ಲೋಡ್ ಲಿಂಕ್ 👉 https://myaadhaar.uidai.gov.in/genricDownloadAadhaar/en
ಆಧಾರ್ ಕಾರ್ಡ್ ಡೌನ್ಲೋಡ್ ಲಿಂಕ್ ಅನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಈ ರೀತಿ ಒಂದು ಪೇಜ್ ಬರುತ್ತೆ ಕೆಳಗಿನ ಚಿತ್ರದ ರೀತಿ ಬರುತ್ತೆ ಗಮನಿಸಿ.
2) ಎರಡನೆ ಹಂತ
ನಂತರ ಇಲ್ಲಿ ಮೂರು ಆಪ್ಷನ್ ಇರುತ್ತೆ ಆಧಾರ್ ಕಾರ್ಡ್ ನಂಬರ್ ಆಗಿ ಡೌನ್ಲೋಡ್ ಮಾಡಬಹುದು ಅಥವಾ enrollment ID ನಂಬರ್ ಆಗಿ ಡೌನ್ಲೋಡ್ ಮಾಡಬಹುದು ( enrollment ID ನಂಬರ್ ಅಂದರೆ ಆಧಾರ್ ಕಾರ್ಡ್ ನಲ್ಲಿ ಏನಾದರೂ ಚೇಂಜ್ ಮಾಡಿಸಿದರೆ ಒಂದು ರಸೀದಿ ಕೊಟ್ಟಿರುತ್ತಾರೆ ಅ ರಸೀದಿ ಯಲ್ಲಿ Enrollment ID ನಂಬರ್ ಅಂತ ಇರುತ್ತೆ ಅ ನಂಬರ್ ನ ಎಂಟರ್ ಮಾಡಿನೂ ಸಹಾ ಆಧಾರ್ ಕಾರ್ಡ್ ನ ಡೌನ್ಲೋಡ್ ಮಾಡಬಹುದು)
ನಂತರ ಆಧಾರ್ ಕಾರ್ಡ್ ನಂಬರ್ ನ ಎಂಟರ್ ಮಾಡಿ , ಕೆಳಗೆ ಎಂಟರ್ ಕ್ಯಾಪ್ಚ ( Enter captcha ) ಅಂತ ಆಪ್ಷನ್ ಇರುತ್ತೆ ಅಲ್ಲಿ ( captcha ಅಂದರೆ 5/6 ಪದಗಳು ) ಇರುತ್ತೆ ಅದನ್ನು ಎಂಟರ್ ಮಾಡಿ. Send OTP ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಉದಾಹರಣೆಗೆ ಕೆಳಗೆ ಇರುವ ಚಿತ್ರವನ್ನು ನೋಡಿ.
3) ಮೂರನೆ ಹಂತ
ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೋಬೈಲ್ ನಂಬರ್ ಗೆ OTP ಬರುತ್ತೆ ಅ OTP ನ Enter OTP ಅಂತ ಆಪ್ಷನ್ ಇರುತ್ತೆ ಅಲ್ಲಿ ಟೈಪ್ ಮಾಡಬೇಕು. OTP ನ ಟೈಪ್ ಮಾಡಿದ ಮೇಲೆ ಕೆಳಗೆ Verify and download ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
4) ನಾಲ್ಕನೇ ಹಂತ
ನಂತರ ಈ ಕೆಳಗಿನ ಚಿತ್ರದ ರೀತಿ ಬರುತ್ತೆ ಇಲ್ಲಿ ಆಧಾರ್ ಕಾರ್ಡ್ successfully download ಅಂತ ಇರುತ್ತೆ . PDF ಫಾರ್ಮೇಟ್ ನಲ್ಲಿ ಡೌನ್ಲೋಡ್ ಆಗಿರುತ್ತೆ. ಅದು 8 ಲೇಟರ್ ಪಾಸ್ವರ್ಡ್ ಎಂಟರ್ ಮಾಡುದ್ರೆ ಮಾತ್ರ PDF ಓಪನ್ ಆಗುತ್ತೆ.
ಹಾಗಾದರೆ 8 ಲೇಟರ್ ಪಾಸ್ವರ್ಡ್ ಏನು ಆಗಿರುತ್ತೆ ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಹೆಸರಿನ ಮೊದಲ ನಾಲ್ಕು ಕ್ಯಾಪಿಟಲ್ ಲೇಟರ್ ( CAPITAL letters ) ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹುಟ್ಟಿದ ವರ್ಷ.
ಉದಾಹರಣೆಗೆ ಇಲ್ಲಿ ಕೊಟ್ಟಿದ್ದಾರೆ ನೋಡಿ : ನಿಮ್ಮ ಹೆಸರು ANISH KUMAR ಅಂತ ಮತ್ತು ಹುಟ್ಟಿದ ವರ್ಷ 1989 ಅಂತ ಇದ್ದರೆ . ANISH1989 ಇದು ನಿಮ್ಮ ಆಧಾರ್ ಕಾರ್ಡ್ ನ ಪಾಸ್ವರ್ಡ್ ಆಗಿರುತ್ತೆ.
ನನ್ನ Suggestion ಆಧಾರ್ ಕಾರ್ಡ್ PDF ಗೆ ಪಾಸ್ವರ್ಡ್ ಇರುವುದರಿಂದ ಸೇಫ್ಟಿ ಇರುತ್ತೆ.
ಇಲ್ಲ PDF ಗೆ ಪಾಸ್ವರ್ಡ್ ಬೇಡ ಅಂದ್ರೆ ಅ ಪಾಸ್ವರ್ಡ್ ನ ರಿಮೂವ್ ಸಹಾ ಮಾಡಬಹುದು.
ಆಧಾರ್ ಕಾರ್ಡ್ PDF ಪಾಸ್ವರ್ಡ್ ರಿಮೂವ್ ಹೇಗೆ ಮಾಡುವುದು
1) ಮೊದಲನೇ ಹಂತ
PDF ಪಾಸ್ವರ್ಡ್ ರಿಮೂವ್ ವೆಬ್ಸೈಟ್ ಲಿಂಕ್ 👉 https://smallpdf.com/
PDF ಪಾಸ್ವರ್ಡ್ ರಿಮೂವ್ ವೆಬ್ಸೈಟ್ ಲಿಂಕ್ ಅನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಕೆಳಗಿನ ಚಿತ್ರದ ರೀತಿ ಒಂದು ಪೇಜ್ ಓಪನ್ ಆಗುತ್ತೆ ಇಲ್ಲಿ Explore all PDF tools ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
2) ಎರಡನೆ ಹಂತ
ನಂತರ ಈ ರೀತಿ ಬರುತ್ತೆ ಇಲ್ಲಿ ಸ್ವಲ್ಪ ಕೆಳಗೆ ಹಾಗೆ ಸ್ವೈಪ್ ಮಾಡಿದಾಗ ಇಲ್ಲಿ Unlock PDF ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ ಕೆಳಗೆ ಇರುವ ಚಿತ್ರವನ್ನು ನೋಡಿ.
3) ಮೂರನೆ ಹಂತ
ನಂತರ ಈ ಕೆಳಗಿನ ಚಿತ್ರದ ರೀತಿ ಬರುತ್ತೆ ಇಲ್ಲಿ chose file ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್ PDF ನ ಅಪ್ಲೋಡ್ ಮಾಡಿ. ಪಾಸ್ವರ್ಡ್ ನ ಕೇಳುತ್ತೆ ಪಾಸ್ವರ್ಡ್ ನ ಎಂಟರ್ ಮಾಡಬೇಕು.
4) ನಾಲ್ಕನೇ ಹಂತ
ನಂತರ Done ✅ ಅಂತ ಬರುತ್ತೆ ಅಲ್ಲಿಯೇ ಕೆಳಗೆ ಡೌನ್ಲೋಡ್ ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ PDF ಡೌನ್ಲೋಡ್ ಆಗುತ್ತೆ ಅಗ ಆಧಾರ್ ಕಾರ್ಡ್ PDF ಓಪನ್ ಮಾಡಿದರೆ ಯಾವುದೇ ಪಾಸ್ವರ್ಡ್ ಕೇಳುವುದಿಲ್ಲ, e aadhar download PDF ಡೈರೆಕ್ಟ್ ಆಗಿ ಓಪನ್ ಆಗುತ್ತೆ.
ಆಧಾರ್ ಕಾರ್ಡ್ ನ ಡೌನ್ಲೋಡ್ ಮಾಡೋದೇಗೆ ಮತ್ತು PDF ಪಾಸ್ವರ್ಡ್ ರಿಮೂವ್ ಮಾಡೋದೇಗೆ ಅಂತ ವೀಡಿಯೋ ಮೂಲಕ ತಿಳಿದುಕೊಳ್ಳುತ್ತಿವಿ ಅಂದರೆ ವೀಡಿಯೋ ಲಿಂಕ್ ಇಲ್ಲಿದೆ ನೋಡಿ ತಿಳಿದುಕೊಳ್ಳಬಹುದು.
ಆಧಾರ್ ಕಾರ್ಡ್ ನ ಮೋಬೈಲ್ ನಲ್ಲಿ ಡೌನ್ಲೋಡ್ ಮಾಡುವ ವೀಡಿಯೋ ಲಿಂಕ್ 👉 https://youtu.be/MfzHgrRziec?si=Z-1aI_r_OklVPONc
PDF ಪಾಸ್ವರ್ಡ್ ರಿಮೂವ್ ವೀಡಿಯೋ ಲಿಂಕ್ 👉 https://youtu.be/CRrnqS8Cn2Q?si=qrTl-JYQnFuLUljo
ಮೋಬೈಲ್ ನಲ್ಲಿ e aadhar download ಮಾಡೋದೇಗೆ ಅನ್ನುವ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಗೆಳೆಯ,ಗೆಳತಿ ಮತ್ತು ಫ್ಯಾಮಿಲಿಗೆ ವಾಟ್ಸಾಪ್, ಫೇಸ್ಬುಕ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.
ಇದನ್ನು ಸಹ ಓದಿ 👉 how to check aadhar link with bank account : ಆಧಾರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದಿಯ Free ಯಾಗಿ 5 ನಿಮಿಷದಲ್ಲಿ ಚೆಕ್ ಮಾಡಿ