deepawali / diwali: ದೀಪಾವಳಿ ( deepawali ) ಹಬ್ಬದ ಹಿಂದಿನ ಕಥೆ ಏನು? 14 ವರ್ಷ ವನವಾಸ ಮುಗಿಸಿ ಶ್ರೀ ರಾಮ ಅಯೋಧ್ಯೆ ಗೆ ಮರಳಿ ಬಂದ ದಿನ!

ಗೆಳೆಯರಿಗೆ ಶೇರ್ ಮಾಡಿ

ದೀಪಾವಳಿ(deepawali)ಹಬ್ಬ ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದು. ದೀಪಾವಳಿ ಹಬ್ಬವನ್ನು ಎಲ್ಲೆಡೆ ಬಹಳಷ್ಟು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಸೂಚಿಸುತ್ತದೆ. ಈ ದೀಪಾವಳಿ ( deepawali )ಹಬ್ಬದ ಕುರಿತು ಕೆಲವು ಮಾಹಿತಿ ಇಲ್ಲಿದೆ ಸಂಪೂರ್ಣ ಓದಿ ತಿಳಿದುಕೊಳ್ಳಿ.

ದೀಪಾವಳಿ(deepawali )ಹಬ್ಬವನ್ನು ದೀಪಗಳನ್ನು ಹಚ್ಚಿ, ಮನೆ ಅಲಂಕಾರ ಮಾಡಿ, ಹೋಸ ಬಟ್ಟೆ ಧರಿಸುವುದು, ಪಟಾಕಿ ಹೊಡೆಯುವುದು, ಸಿಹಿ ತಿಂಡಿ ಮಾಡಿ ಸವಿಯುವುದು, ಗೆಳೆಯರಿಗೆ ಸಂಬಂಧಿಕರಿಗೆ ಉಡುಗೊರೆ ನೀಡುವುದು ಮತ್ತು ದೇವರ ಪೂಜೆ ಮಾಡಿ ಈ ಹಬ್ಬವನ್ನು ಆಚರಿಸುತ್ತಾರೆ.

ಶ್ರೀ ರಾಮ ಅಯೋಧ್ಯೆ ಗೆ ಮರಳಿ ಬಂದ ದಿನ

ಪುರಾಣಗಳ ಪ್ರಕಾರ ಶ್ರೀ ರಾಮ ತನ್ನ ಸಹೋದರ ಮತ್ತು ತನ್ನ ಪತ್ನಿ ಸೀತಾಮಾತೆಯೊಂದಿಗೆ 14 ವರ್ಷಗಳ ವನವಾಸಕ್ಕಾಗಿ ಕಾಡಿಗೆ ತೆರಳುತ್ತಾರೆ. ಕಾಡಿನಲ್ಲಿದ್ದ ಸಮಯದಲ್ಲಿ ಲಂಕಾಧಿಪತಿ ರಾವಣನು ಶ್ರೀ ರಾಮನ ಪತ್ನಿಯದ ಸೀತಾಮಾತೆಯನ್ನು ಮೋಸದಿಂದ ಅಪಹರಿಸಿಕೊಂಡು ಹೋಗಿ,ಲಂಕೆಯಲ್ಲಿ ಇಟ್ಟುಕೊಂಡಿರುತ್ತಾನೆ. ಇದನ್ನು ತಿಳಿದ ರಾಮನು ಸುಗ್ರೀವನೊಂದಿಗೆ, ಹನುಮಂತನೊಂದಿಗೆ ಮತ್ತು ವಾನರ ಸೈನ್ಯದೊಂದಿಗೆ ಲಂಕೆಯ ಮೇಲೆ ದಾಳಿ ಮಾಡಿ ರಾವಣನನ್ನು ಕೊಂದು ಸೀತಾ ದೇವಿಯನ್ನು ಮರಳಿ ಪಡೆಯುತ್ತಾನೆ. ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧವಾಗಿದ್ದು, ಈ ಯುದ್ಧದಲ್ಲಿ ಧರ್ಮವು ತನ್ನ ಗೆಲುವನ್ನು ಸಾಧಿಸುತ್ತದೆ

ಇದಾದ ನಂತರ 14 ವರ್ಷಗಳ ವನವಾಸವು ಮುಗಿದು ರಾಮನು ತನ್ನ ಪತ್ನಿ ಸೀತೆಯೊಂದಿಗೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಾರೆ. ರಾಮನು ಅಯೋಧ್ಯೆಗೆ ಬರುವ ಸಮಯದಲ್ಲಿ ಅಲ್ಲಿನ ಜನರು ತುಪ್ಪದ ದೀಪಗಳನ್ನು ಸಂಪೂರ್ಣ ಅಯೋಧ್ಯೆಯಲ್ಲಿ ಹಚ್ಚುವ ಮೂಲಕ ರಾಮನನ್ನು ತಮ್ಮ ರಾಜ್ಯಕ್ಕೆ ಸ್ವಾಗತಿಸುತ್ತಾರೆ. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ದೀಪಾವಳಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ.

ನರಕ ಚತುರ್ದಶಿ ಕಥೆ

ಪುರಾಣಗಳ ಪ್ರಕಾರ ವಿಷ್ಣು ವರಾಹ ಅವತಾರದಲ್ಲಿರುವಾಗ ವರಾಹ ಮತ್ತು ಭೂದೇವಿಗೂ ಅದ ಪ್ರೇಮದಿಂದ ನರಕಾಸುರನ ಜನನವಾಗುತ್ತದೆ. ನರಕಾಸುರನಲ್ಲಿ ರಕ್ಷಿಸಿ ಗುಣ ಇರುವುದನ್ನು ನೋಡಿ ನರಕಾಸುರನನ್ನು ವರಾಹ ಕೊಲ್ಲಲು ಮುಂದಾದಾಗ ಭೂದೇವಿ ತನ್ನ ಮಗುವನ್ನು ಕೊಲ್ಲದಂತೆ ವರಾಹನನ್ನು ತಡೆದಳು ಹಾಗೂ ತನ್ನ ಮಗನ ದೀರ್ಘಾಯುಷ್ಯಕ್ಕೆ ಬೇಡಿಕೆಯಿಟ್ಟಳು. ಆಗ ವರಾಹ ಅವತಾರದಲ್ಲಿದ್ದ ವಿಷ್ಣು “ಕೇವಲ ಭೂದೇವಿಯಿಂದ ಮಾತ್ರ ನರಕಾಸುರ ಸಾವು” ಎಂಬ ವರ ಕೊಟ್ಟನು. ಮುಂದೆ ಆ ನರಕಾಸುರ ರಾಕ್ಷಸಿತನದಿಂದ ಬೆಳೆಯಿತು. ನರಕಾಸುರನಿಗೆ ಯಾವ ಭಯವೂ ಇಲ್ಲದಾಯಿತು. ನರಕಾಸುರ ದೇವತೆಗಳ ಮೇಲೆ, ಮಾನವರ ಮೇಲೆ, ದಾನವರ ಮೇಲೆ ಎಲ್ಲರ ಮೇಲೆಹಿಡಿತ ಸಾಧಿಸಲು ಪ್ರಾರಂಭಿಸಿದನು. ಭೂಲೋಕದಲ್ಲಿ ಇರುವ ರಾಜರುಗಳ ನಡುವೆ ಯುದ್ದ ಮಾಡಿ ರಾಜ್ಯವನ್ನು ವಶಪಡಿಸಿಕೊಂಡು ಮತ್ತು ಅ ರಾಜ್ಯದ ಇರುತಿದ್ದ ರಾಣಿಯರನ್ನ ತನ್ನ ಸಾಮ್ರಾಜ್ಯದಲ್ಲಿ ಬಂಧಿಸಿ ಇಡುತ್ತಿದ್ದನಂತೆ.

ನರಕಾಸುರ ಕೊಡುತ್ತಿದ್ದ ತೊಂದರೆಯ ಬಗ್ಗೆ ದೇವಾನುದೇವತೆಗಳು ಮತ್ತು ಭೂವಾಸಿಗಳು ಎಲ್ಲಾ ಸತ್ಯಭಾಮೆಯನ್ನ ಕೇಳಿಕೊಳ್ಳುತ್ತಾರೆ. ಸತ್ಯಭಾಮೆ ಯನ್ನೇ ಯಾಕೆ ಕೇಳಿಕೊಳ್ಳುತ್ತಾರೆ ಅಂದರೆ ಸತ್ಯಭಾಮೆ ಮೊದಲು ಭೂದೇವಿ ಅವತಾರದಲ್ಲಿ ಇದ್ದ ಕಾರಣ . ಆಗ ಕೃಷ್ಣ ಮತ್ತು ಸತ್ಯಭಾಮೆ ಇಬ್ಬರು ನರಕಾಸುರ ಸ್ಥಳಕ್ಕೆ ಬಂದು ಕೃಷ್ಣ ಮತ್ತು ನರಕಾಸುರ ನಡುವೆ ಯುದ್ದ ವಾಗುವುದು ಆಗ ಸತ್ಯಭಾಮೆ ನರಕಾಸುರನಿಗೆ ಬಾಣಗಳನ್ನು ಬಿಟ್ಟಳು .ಆಗ ನರಕಾಸುರ ಸಾಯುವಾಗ ಸತ್ಯಭಾಮೆಯಿಂದ “ನನ್ನ ಸಾವನ್ನು ಬಣ್ಣಬಣ್ಣದ ದೀಪಗಳ ಬೆಳಕಿನಿಂದ ಆಚರಿಸಬೇಕು…” ಎಂದು ವರ ಕೇಳಿದನು. ದೇವಿ ಅವನಿಗೆ ಈ ವರವನ್ನು ಕೊಟ್ಟಳು. ಅದಕ್ಕಾಗಿ ಅವತ್ತಿನಿಂದ ನಾವೆಲ್ಲರೂ ದೀಪಾವಳಿಯಲ್ಲಿ ಈ ನರಕ ಚತುರ್ದಶಿಯನ್ನು ಆಚರಿಸುತ್ತಾ ಬಂದಿದ್ದೇವೆ.

ಬಲಿಪಾಡ್ಯ ಕಥೆ

ಅಸುರರ ರಾಜನಾದ ಮಹಾಬಲಿಯು ಪ್ರಹ್ಲಾದನ ಮೊಮ್ಮಗ. ಶೌರ್ಯ, ಪ್ರಾಮಾಣಿಕತೆ ಮತ್ತು ವಿಷ್ಣುಭಕ್ತಿಗೆ ಹೆಸರುವಾಸಿಯಾಗಿದ್ದ. ದೇವತೆಗಳನ್ನು ಸೋಲಿಸಿ ಅಧಿಕಾರಕ್ಕೆ ಬಂದು ಮೂರೂ ಲೋಕಗಳನ್ನು ತನ್ನ ವಶಕ್ಕೆ ಪಡೆದುಕೋಳ್ಳುತ್ತಿದ್ದ. ಆಗ ದೇವತೆಗಳು ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ಈ ಸಮಯದಲ್ಲಿ ಮಹಾಬಲಿಯು ಒಂದು ಯಾಗವನ್ನು ಮಾಡುತ್ತಾನೆ. ಯಾಗದಲ್ಲಿ ಬಂದವರಿಗೆ ಕೇಳಿದ ಉಡುಗೊರೆ‌ನೆಲ್ಲ ಕೊಡುತ್ತಿದ್ದ. ಈ ಸಂದರ್ಭದಲ್ಲಿ ಮಹಾವಿಷ್ಣು ಪುಟ್ಟ ಬಾಲಕ ವಾಮನ ಅವತಾರದಲ್ಲಿ ಬರುತ್ತಾರೆ. ಬಾಲಕ ವಾಮನನಿಗೆ ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ, ನಿನಗೇನು ಬೇಕು ಎಂದು ಬಲಿ ಕೇಳಿದಾಗ, ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗವನ್ನು ನೀಡು ಎಂದು ಕೇಳುತ್ತಾನೆ.

ಬಾಲಕ ವಾಮನ ಆಸೆಯಂತೆ ಮಹಾಬಲಿ ಒಪ್ಪಿಕೊಳ್ಳುತ್ತಾನೆ. ಅಗ‌ ವಾಮನ ಬೃಹತ್ ಗಾತ್ರದಲ್ಲಿ ಬೆಳೆದು ಮಹಾಬಲಿಯು ಆಳಿದ ಎಲ್ಲ ಪ್ರದೇಶವನ್ನೂ ಕೇವಲ ಎರಡು ಹೆಜ್ಜೆಗಳಲ್ಲಿ ಆವರಿಸಿದನು. ಮೂರನೆ ಹೆಜ್ಜೆಯನ್ನು ಎಲ್ಲಿಡಲಿ ಎಂದು ವಾಮನ ಕೇಳಿದಾಗ ವಾಮನ ಮಹಾವಿಷ್ಣು ಎಂದು ತಿಳಿದು ಮೂರನೆ ಹೆಜ್ಜೆಗೆ ತನ್ನ ತಲೆಯನ್ನು ವಿಷ್ಣುವಿಗೆ ಅರ್ಪಿಸಿದನು. ವಿಷ್ಣುವು ಅವನನ್ನು ಪಾತಾಳಕ್ಕೆ ತುಳಿಯುತ್ತಾನೆ.ಮಹಾಬಲಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣುವು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ. ವಿಷ್ಣುಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರನಿಗೆ ಪೂಜೆಯನ್ನು ನಡೆಸಲಾಗುತ್ತದೆ.

ಇದಾಗಿತ್ತು ದೀಪಾವಳಿ ಹಬ್ಬದ ಕಥೆ. ತಪ್ಪದೆ ಇದನ್ನು ನಿಮ್ಮ ಗೆಳೆಯರಿಗೂ ಶೇರ್ ಮಾಡಿ .

ಇದನ್ನು ಸಹ ಓದಿ iPhone 16 pro max : ಐ ಫೋನ್ 16 ಪ್ರೊ ಮ್ಯಾಕ್ಸ್ ನ ಬೆಲೆ ಎಷ್ಟು ಮತ್ತು ಫೀಚರ್ಸ್ ಗಳೇನು?

Leave a Comment

Your email address will not be published. Required fields are marked *

Scroll to Top