ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಂಚ ಯೋಜನೆಗಳಲ್ಲಿ ಈ ಗೃಹಲಕ್ಷೀ ಯೋಜನೆಯು ಒಂದು. ಈ ಯೋಜನೆಯ ಪ್ರಕಾರ ಪಡಿತರ ಚೀಟಿಯಲ್ಲಿ ಇರುವ ಮನೆಯ ಮುಖ್ಯ ಗೃಹಿಣಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ.ಮತ್ತು ಇದೆ ರೀತಿ ಪಡಿತರ ಚೀಟಿಯ ಸದಸ್ಯರ ಸಂಖ್ಯೆ ಪ್ರಕಾರ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ( anna bhagya dbt status ) ಮಾಡಲಾಗುತ್ತಿದೆ.
2023 ರಿಂದ 2024 ರ ವರೆಗೆ ಯಾವ ಯಾವ ತಿಂಗಳಿನದು ಹಣ ಬಂದಿದೆ ಅಂತ ಚೆಕ್ ಮಾಡೋದೇಗೆ ಅಂತ ಇಲ್ಲಿದೆ ಸಂಪೂರ್ಣ ಮಾಹಿತಿ.
ಯಾವ ಯಾವ ತಿಂಗಳಿನದು ಹಣ ಬಂದಿದೆ ಅಂತ ಚೆಕ್ ಮಾಡುವುದರಿಂದ ಇನ್ನೂ ಯಾವುದಾದ್ರೂ ತಿಂಗಳಿನ ಹಣ ಬರಬೇಕ ಅಂತ ತಿಳಿದುಕೊಳ್ಳಬಹುದು ಮತ್ತು ಕೆಲವರಿಗೆ ಯಾವ ತಿಂಗಳಿನಲ್ಲಿ ಯಾವ ದಿನ ಬಂದಿದೆ ಅಂತ ಚೆಕ್ ಮಾಡೋಕೆ ಆಸಕ್ತಿ ಇರಬಹುದು.
anna bhagya dbt status ಚೆಕ್ ಮಾಡೋದೇಗೆ ?
ಆ್ಯಪ್ ಲಿಂಕ್ 👉https://play.google.com/store/apps/details?id=com.dbtkarnataka
1) ಮೊದಲನೇ ಹಂತ
ಯಾವ ಯಾವ ತಿಂಗಳಿನದು ಹಣ ಬಂದಿದೆ ಅಂತ ಚೆಕ್ ಮಾಡೋಕೆ ಡಿಬಿಟಿ ( DBT APP ) ಅಂತ ಕರ್ನಾಟಕ ಗೌರ್ಮೆಂಟ್ ರವರ ಆ್ಯಪ್ ಇದೆ ಈ ಆ್ಯಪ್ ನ ಡೌನ್ಲೋಡ್ ಮಾಡಬೇಕು. ಆ್ಯಪ್ ಲಿಂಕ್ ಅಂತ ಮೇಲೆ ಆಪ್ಷನ್ ಇದೆ ಅ ಲಿಂಕ್ ಮೇಲೆ ಕ್ಲಿಕ್ ಮಾಡುದ್ರೆ ಡೈರೆಕ್ಟ್ ಪ್ಲೇ ಸ್ಟೋರ್ ಗೆ ಹೋಗುತ್ತೆ ಆಗ ಈ ಡಿಬಿಟಿ ( DBT APP ) ಆ್ಯಪ್ ನ ಡೌನ್ಲೋಡ್ ಮಾಡಿ ಆ್ಯಪ್ ನ ಓಪನ್ ಮಾಡಿದಾಗ ಈ ಕೆಳಗಿನ ಚಿತ್ರದ ರೀತಿ ಬರುತ್ತೆ.

2) ಎರಡನೆ ಹಂತ
ಇಲ್ಲಿ ಎಂಟರ್ ಆಧಾರ್ ನಂಬರ್ ಅಂತ ಇರುತ್ತೆ ಅಲ್ಲಿ ಪಡಿತರ ಚೀಟಿಯಲ್ಲಿ ಇರುವ ಮನೆಯ ಮುಖ್ಯ ಗೃಹಿಣಿಯ ಆಧಾರ್ ಕಾರ್ಡ್ ನಂಬರ್ ನ ಎಂಟರ್ ಮಾಡಬೇಕು. ಆಧಾರ್ ಕಾರ್ಡ್ ನಂಬರ್ ನ ಎಂಟರ್ ಮಾಡಿದಮೇಲೆ, ಅದರ ಕೆಳಗೆ ಒಂದು ಚಿಕ್ಕ ಬಾಕ್ಸ್ ಇರುತ್ತೆ ಅ ಬಾಕ್ಸ್ ನ ಟಿಕ್ ಮಾಡಬೇಕು. ನಂತರ GET OTP ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ.

3) ಮೂರನೆ ಹಂತ
ಎಂಟರ್ ಮಾಡಿರುವ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೋಬೈಲ್ ನಂಬರ್ ಗೆ OTP ಬರುತ್ತೆ ಅ OTP ನ ಎಂಟರ್ ಮಾಡಿ, VERIFY OTP ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಿನ ಚಿತ್ರವನ್ನು ಗಮನಿಸಿ

4) ನಾಲ್ಕನೇ ಹಂತ
ನಂತರ ಈ ಕೆಳಗಿನ ಚಿತ್ರದ ರೀತಿ ಬರುತ್ತೆ ಇಲ್ಲಿ Create mPin ಅಂತ ಇರುತ್ತೆ ನಾಲ್ಕು ಡಿಜಿಟ್ ನ ಪಿನ್ ನ ಎಂಟರ್ ಮಾಡಿ. Enter mPin ಮತ್ತು Confirm mPin ಎರಡು ಆಪ್ಷನ್ ಹತ್ರ ನು ಸೇಮ್ ಪಿನ್ ಎಂಟರ್ ಮಾಡಿ. ಈ ಪಿನ್ ಈ ಆ್ಯಪ್ ಗೆ ಲಾಗಿನ್ ಆಗುವಾಗ ಬೇಕಾಗುತ್ತದೆ ನೆನಪಿರಲಿ. ನಂತರ SUBMIT ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕೆಳಗಿನ ಚಿತ್ರವನ್ನು ಗಮನಿಸಿ.

5) ಐದನೇ ಹಂತ
ನಂತರ ಪರ್ಸನಲ್ ಡೀಟೈಲ್ಸ್ ( Personal information) ಬರುತ್ತೆ . ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ಹೆಸರು, ಅಡ್ರೆಸ್ ಬರುತ್ತೆ. ನಂತರ ಲಾಸ್ಟ್ ಅಲ್ಲಿ ಮೋಬೈಲ್ ನಂಬರ್ ಅಂತ ಇರುತ್ತೆ ಅಲ್ಲಿ ಮೋಬೈಲ್ ನಂಬರ್ ನ ಎಂಟರ್ ಮಾಡಿ . OK ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕೆಳಗಿನ ಚಿತ್ರವನ್ನು ಗಮನಿಸಿ.

6) ಆರನೇ ಹಂತ
ನಂತರ ಈ ಆ್ಯಪ್ ಓಪನ್ ಆಗುತ್ತೆ ಇಲ್ಲಿ. ಪೇಮೆಂಟ್ ಸ್ಟೇಟಸ್ ( Payment Status ) ಅಂತ ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕೆಳಗಿನ ಚಿತ್ರವನ್ನು ಗಮನಿಸಿ.

7) ಏಳನೇ ಹಂತ
ನಂತರ ಯಾವ ಯಾವ ಯೋಜನೆ ಪಡೆದಿದ್ದಾರೆ ಅಂತ ಇರುತ್ತೆ.
ಇಲ್ಲಿ ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡೋಕೆ ಅನ್ನಭಾಗ್ಯ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.

8) ಎಂಟನೇ ಹಂತ
ಅನ್ನಭಾಗ್ಯ ಯೋಜನೆಯ ಹಣ ಯಾವ ತಿಂಗಳಿನಲ್ಲಿ ಯಾವ ದಿನ ಹಣ ಬಂದಿದೆ ಅಂತ ನೋಡಬಹುದು.

9) ಒಂಬತ್ತನೇ ಹಂತ
ಪಕ್ಕದಲ್ಲೇ ಒಂದು ಆಪ್ಷನ್ ಇರುತ್ತೆ ಅ ಆಪ್ಷನ್ ಮೇಲೆ ಕ್ಲಿಕ್ ಮಾಡುದ್ರೆ ಯಾವ ಬ್ಯಾಂಕ್ ಖಾತೆಗೆ ಹಣ ಬಂದಿದೆ ಮತ್ತು ಬ್ಯಾಂಕ್ ಖಾತೆಯ ಲಾಸ್ಟ್ 4 ನಂಬರ್ ನ ನೋಡಬಹುದು. ಕೆಳಗಿನ ಚಿತ್ರವನ್ನು ಗಮನಿಸಿ.

10) ಹತ್ತನೇ ಹಂತ
ಸೇಮ್ ಇದೆ ರೀತಿ ಅನ್ನಭಾಗ್ಯ ಯೋಜನೆಯ ಹಣ ಯಾವ ಯಾವ ತಿಂಗಳಿನದು ಬಂದಿದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಹಣ ಬಂದಿದೆ ಅಂತ ನೋಡಬಹುದು.

gruhalakshmi dbt status ಮತ್ತು anna bhagya dbt status ಚೆಕ್ ಮಾಡೋದೇಗೆ ಅನ್ನುವ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಗೆಳೆಯ, ಗೆಳತಿ ಮತ್ತು ಕುಟುಂಬದವರಿಗೂ ಶೇರ್ ಮಾಡಿ.
ಇದನ್ನು ಸಹ ಓದಿ ತಿಳಿದುಕೊಳ್ಳಿ 👉 ration card status ಪಡಿತರ ಚೀಟಿಯ ಸ್ಟೇಟಸ್ Active ಇದಿಯಾ ಅಂತ Easy ಯಾಗಿ 5 ನಿಮಿಷದಲ್ಲಿ ಚೆಕ್ ಮಾಡಿ